ತಮಿಳುನಾಡು, ಮಾ.01 (DaijiworldNews/PY): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮಿಳು ಭಾಷೆ ಮಾತನಾಡಲು ಬಾರದಿರುವುದಕ್ಕೆ ತಮಿಳುನಾಡು ಜನರ ಕ್ಷಮೆ ಕೋರಿದ್ದು, "ದೇಶದ ಅತ್ಯಂತ ಹಳೆಯ ಭಾಷೆಯನ್ನು ಮಾತನಾಡಲು ಬಾರದಿರುವುದಕ್ಕೆ ದುಃಖವಾಗುತ್ತಿದೆ" ಎಂದಿದ್ದಾರೆ.
ವಿಲ್ಲುಪುರಂನಲ್ಲಿ ವಿಜಯ ಸಂಕಲ್ಪ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ತಮಿಳುನಾಡಿನ ರೈಲ್ವೆ ನಿಲ್ದಾಣಗಳಲ್ಲಿ ಈ ಹಿಂದೆ ಎಲ್ಲಾ ಪ್ರಕಟಣೆಗಳನ್ನು ಇಂಗ್ಲೀಷ್ನಲ್ಲಿ ಮಾಡಲಾಗುತ್ತಿತ್ತು. ಈಗ ತಮಿಳಿನಲ್ಲಿ ಪ್ರಕಟಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬದಲಾವಣೆಯನ್ನು ಮಾಡಿದ್ದಾರೆ" ಎಂದು ಹೇಳಿದ್ದಾರೆ.
ರವಿವಾರ ಪ್ರಧಾನಿ ಮೋದಿ ಅವರು ಸಹ ತಮಿಳು ಭಾಷೆ ಕಲಿಯಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು.
ತಮಿಳುನಾಡಿನಲ್ಲಿ ಎಪ್ರಿಲ್ 6ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.