ತಿರುವನಂತಪುರಂ, ಫೆ. 28 (DaijiworldNews/SM): ದೇವರ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಕೇರಳವನ್ನು ಇದೀಗ ಮೂಲಭೂತವಾಗಿಗಳ ನಾಡಗಿ ಮಾರ್ಪಾಡಾಗಿದೆ ಎಂದು ಕೆಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.
ಕೇರಳದಲ್ಲಿ ನಡೆಯುತ್ತಿರುವ ಸುರೇಂದ್ರನ್ ಅವರ ವಿಜಯಯಾತ್ರೆಯ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಿಪಿಎಂ ಹಾಗೂ ಎಸ್ ಡಿಪಿಐ ಪಕ್ಷಗಳು ಪರೋಕ್ಷವಾಗಿ ಮೈತ್ರಿ ಮಾಡಿಕೊಂಡಿದ್ದು, ಎಲ್ ಡಿಎಫ್ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದರು.
ಕೇರಳದಲ್ಲಿ 1921ರಲ್ಲಿ ನಡೆದಿದ್ದ ಹಿಂದೂ ಹತ್ಯಾಕಾಂಡದ ವರ್ಷಾಚರಣೆ ನಡೆಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ದೂರಿದರು. ಸಿಪಿಐಎಂ ಕೇವಲ ಅಲ್ಪಸಂಖ್ಯಾತರ ಪರ ಮಾತ್ರವಲ್ಲದೆ, ಮೂಲಭೂತವಾದಿಗಳ ಪರವೂ ಆಗಿದೆ ಎಂದು ವಾಗ್ದಾಳಿ ನಡೆಸಿದರು. ಕೇರಳದಲ್ಲಿ ರಾಜಕೀಯ ವೈಷಮ್ಯಗಳು ತಾರಕಕ್ಕೇರಿವೆ ಎಂದು ಆರೋಪಿಸಿರುವ ಅವರು, ಇಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.