ಬೆಂಗಳೂರು, ಫೆ.28 (DaijiworldNews/HR): "ಸಿ.ಡಿಯಿಂದಲೋ, ಫೋಟೊಗಳಿಂದಲೋ ಯೋಗೀಶ್ವರ್ಗೆ ಬಿಜೆಪಿ ಪರಿಷತ್ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ" ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ, ಚನ್ನಪಟ್ಟಣದಲ್ಲಿ ಸರ್ವಪಕ್ಷ ಸದಸ್ಯ ಸಿ.ಪಿ.ಯೋಗೀಶ್ವರ್ ಬೆಂಬಲಿತ ಅಭ್ಯರ್ಥಿಗಳು ಹೇಳಹೆಸರಿಲ್ಲದೇ ಸೋತಿದ್ದಾರೆ. 80% ಜೆಡಿಎಸ್ ಗೆದ್ದಿದೆ. ದಿನೇ ದಿನೇ ಚನ್ನಪಟ್ಟಣ ಕ್ಷೇತ್ರ ದೂರವಾಗುತ್ತಿರುವುದು ನೋಡಲಾಗದೇ ಕ್ಷೇತ್ರ ಕಳೆದುಹೋಗಿರುವ ನೋವು ತಡೆಯಲಾಗದೇ ಯೋಗೇಶ್ವರ್ ಗೆ ಮತಿ ಭ್ರಮಣೆಯಾಗಿದೆ" ಎಂದರು.
"ಚನ್ನಪಟ್ಟಣದ ಚಕ್ಕೆರೆ ಸರ್ವಪಕ್ಷ ಸದಸ್ಯ ಯೋಗೇಶ್ವರ್ ಹುಟ್ಟೂರು. ಯಾವುದೇ ನಾಯಕನಿಗೆ ಹುಟ್ಟೂರಿನಲ್ಲಾದರೂ ಮರ್ಯಾದೆ ಇರುತ್ತದೆ. ಆದರೆ, ಯೋಗೇಶ್ವರ್ ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ. ಮೊನ್ನೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಇಡೀ ಚಕ್ಕರೆ ಗ್ರಾಮ ಪಂಚಾಯಿತಿ ಜೆಡಿಎಸ್ ಬೆಂಬಲಿಸಿದೆ. ಈ ನೋವು ಆವರನ್ನು ಕಾಡುತ್ತಿರಬಹುದು" ಎಂದಿದ್ದಾರೆ.
ಇನ್ನು "ಹುಟ್ಟೂರಲ್ಲೇ ಗೆಲ್ಲದ ಯೋಗೇಶ್ವರ್ ಕ್ಷೇತ್ರ ಗೆಲ್ಲಲು ಸಾಧ್ಯವೇ? ಮುಂದಿನ ದಿನಗಳಲ್ಲಿ ಎಚ್ಡಿಕೆಯನ್ನು ಚನ್ನಪಟ್ಟಣದಿಂದ ಹೊರಹಾಕುತ್ತೇನೆ ಎಂಬ ಯೋಗೇಶ್ವರ್ ಮಾತು ವಾಸ್ತವವೇ? ಯೋಗೇಶ್ವರ್ ಲೀಲೆಗಳು ಅಲ್ಲಿನ ಜನರಿಗೆ ಮನದಟ್ಟಾಗಿವೆ. ಸಿ.ಡಿಯಿಂದಲೋ, ಫೋಟೊಗಳಿಂದಲೋ ಬಿಜೆಪಿ ಪರಿಷತ್ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ.ಅದನ್ನು ಅಚ್ಚುಕಟ್ಟಾಗಿ ಮಾಡಲಿ" ಎಂದು ಹೇಳಿದ್ದಾರೆ.