ಶ್ರೀನಗರ, ಫೆ.28 (DaijiworldNews/HR): ಶ್ರೀನಗರದಲ್ಲಿ ಉಗ್ರರ ಗುಂಡಿಗೆ ಗುರಿಯಾಗಿದ್ದ ಕೃಷ್ಣ ಧಾಬಾ ಹೋಟೆಲ್ನ ಮಾಲೀಕನ ಮಗ ರವಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಆಕಾಶ್ ಮೆಹ್ರಾ ಎಂಬ ಯುವಕ ಕಳೆದ 10 ದಿನಗಳಿಂದ ಎಸ್ಎಂಎಚ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು "ಫೆಬ್ರುವರಿ 17ರಂದು ಉಗ್ರರು ಆಕಾಶ್ ಮೆಹ್ರಾ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಮುಸ್ಲಿಂ ಜಾನ್ಭಾಸ್ ಫೋರ್ಸ್ ಉಗ್ರ ಸಂಘಟನೆಯು ಈ ದಾಳಿ ನಡೆಸಿದೆ ಎಂದು ಶಂಕಿಸಲಾಗಿದ್ದು, ಈಗಾಗಲೇ ಈ ಪ್ರಕರಣದಡಿ ಮೂವರನ್ನು ಬಂಧಿಸಲಾಗಿದೆ" ಎನ್ನಲಾಗಿದೆ.