ಬೆಂಗಳೂರು, ಫೆ.28 (DaijiworldNews/HR): "ಮುಂದಿನ ದಿನಗಳಲ್ಲಿ ಉಪಚುನಾವಣೆ ನಡೆಯುವ ನಾಲ್ಕು ಕ್ಷೇತ್ರಗಳಿಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದಿಲ್ಲ" ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಂದಿನ ದಿನಗಳಲ್ಲಿ ಉಪಚುನಾವಣೆ ನಡೆಯುವ ನಾಲ್ಕು ಕ್ಷೇತ್ರಗಳಿಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದಿಲ್ಲ. ಈಗಾಗಲೇ ಉಪಚುನಾವಣೆ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದ್ದು, ಉಪಚುನಾವಣೆಗಳಲ್ಲಿ ನೂರಕ್ಕೆ ನೂರು ನಾವೇ ಗೆಲುವು ಸಾಧಿಸುತ್ತೇವೆ" ಎಂದರು.
ಇನ್ನು "ಈಗಾಗಲೇ ಬಜೆಟ್ ಸಂಬಂಧಿಸದಂತೆ ಎಲ್ಲ ಚರ್ಚೆ ಮುಗಿದಿದ್ದು, ಸೋಮವಾರ ಬಜೆಟ್ ಸಿದ್ಧತೆ ಅಂತಿಮಗೊಳಿಸುತ್ತೇನೆ" ಎಂದು ಹೇಳಿದ್ದಾರೆ.