ಮೈಸೂರು, ಫೆ.28 (DaijiworldNews/HR): "ಮೈಸೂರು ಪಾಲಿಕೆಯ ಮೈತ್ರಿ ಗೊಂದಲಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಕಾರಣ" ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, " ಸಿದ್ದರಾಮಯ್ಯ ಅವರಿಗೆ ಜನತಾದಳದ ಶಕ್ತಿ ಏನೆಂಬುದನ್ನು ನಾವು ತೋರಿಸಿದ್ದೇವೆ. ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಿಂದಲೇ ನಮ್ಮ ಶಕ್ತಿ ತೋರಿಸಿದ್ದೇವೆ. ತಾವು ಬೆಳೆದ ಪ್ರಾದೇಶಿಕ ಪಕ್ಷವನ್ನು ಹಗುರವಾಗಿ ನೋಡಬೇಡಿ. ಚಿಕ್ಕದಾಗಿ ನೋಡಬೇಡಿ" ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು "ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಮೈತ್ರಿ ಆಗಲು ಜಿ.ಟಿ.ದೇವೇಗೌಡ ಮತ್ತು ಸಂದೇಶ್ ನಾಗರಾಜ್ ಕಾರಣ. ಅವರು ಚುನಾವಣೆಗೆ ಬಂದಿದ್ದರೆ ನಾವು ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ. ಬದಲಿಗೆ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದೆವು. ಆದರೆ ಅವರಿಬ್ಬರು ಗೈರಾಗಿದ್ದು, ಮುಂದಿನ ಸಾರಿ ಕಾಂಗ್ರೆಸ್ಗೆ ಮೇಯರ್ ಸ್ಥಾನ ನೀಡುತ್ತೇವೆ" ಎಂದಿದ್ದಾರೆ.
"ಸಿದ್ದರಾಮಯ್ಯ ಅವರಿಗೆ ಮಾತಿನ ಮೇಲೆ ಹಿಡಿತವಿರಬೇಕು. ಯಾವುದೇ ಡ್ರಾಮಾ ಗೊಂದಲಗಳಿಲ್ಲದೆ ಮೇಯರ್ ಸ್ಥಾನ ನೀಡುತ್ತಿದ್ದೇವು, ಆದರೆ ಹೀನಾಯವಾಗಿ ಮಾತನಾಡಿದ್ದರಿಂದ ಕೊಡಲಿಲ್ಲ. ಶಕ್ತಿ ತೋರಿಸಲು ಅಭ್ಯರ್ಥಿ ಹಾಕಿದೆವು ಅಷ್ಟೇ" ಎಂದು ಹೇಳಿದ್ದಾರೆ.