ಪಾಲಕ್ಕಾಡ್, ಫೆ.27 (DaijiworldNews/MB) : ''ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಕೇರಳ ರಾಜ್ಯದಲ್ಲಿ ಲವ್ ಜಿಹಾದ್ ತಡೆಗೆ ಕಾನೂನು ಜಾರಿ ಮಾಡುತ್ತೇವೆ'' ಎಂದು ಬಿಜೆಪಿಯನ್ನು ಒಳಗೊಂಡ ಎನ್ಡಿಎ ಮೈತ್ರಿಕೂಟ ಹೇಳಿದೆ.
ಕೇರಳ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರನ್ ಶನಿವಾರ ಮಾತನಾಡಿದ್ದು, ''ಆ ಕಾನೂನು ಜಾರಿಗೆ ತಂದು ಉತ್ತರ ಪ್ರದೇಶಕ್ಕಿಂತಲೂ ಅಧಿಕವಾಗಿ ಇಲ್ಲಿ ನಾವು ಲವ್ ಜಿಹಾದ್ ಪ್ರಕರಣಗಳನ್ನು ತಡೆಗಟ್ಟುತ್ತೇವೆ. ಕ್ರೈಸ್ತ ಸಮುದಾಯವೂ ಕೂಡಾ ಮುಸ್ಲೀಮರ ಈ ಲವ್ ಜಿಹಾದ್ನಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಅವರು ಕೂಡಾ ಇದರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ'' ಎಂದು ಸುರೇಂದ್ರನ್ ಹೇಳಿದರು.
ಹಾಗೆಯೇ, ''ಕೇರಳದಲ್ಲಿ ಬಿಜೆಪಿಯು ಐಯುಎಂಎಲ್, ಸಿಪಿಐ (ಎಂ) ಕಾಂಗ್ರೆಸ್ ಜೊತೆಗೆ ಕೈ ಜೋಡಿಸದೆ, ಈ ಪಕ್ಷಗಳೊಂದಿಗೆ ಯಾವುದೇ ಸಂಬಂಧವಿಲ್ಲದ ಪಕ್ಷದೊಂದಿಗೆ ಮಾತ್ರ ಮೈತ್ರಿ ಮಾಡಿಕೊಳ್ಳುತ್ತೇವೆ'' ಎಂದರು.