ಚಾಮರಾಜನಗರ, ಫೆ.27 (DaijiworldNews/HR): "ಹಿಂದುತ್ವವನ್ನು ಟೀಕೆ ಮಾಡಿದರೆ ಹಿಂದೂ ವಿರೋಧಿಗಳಲ್ಲ. ಹಿಂದುತ್ವ ಎನ್ನುವುದು ರಾಜಕೀಯ ಸಿದ್ಧಾಂತ. ಅಡಿಯಾಳಾಗಿ ಬದುಕಬೇಕೆಂಬು ಹಿಂದುತ್ವ. ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವುದು ಹಿಂದೂ ಧರ್ಮ. ಹೀಗಾಗಿ ಹಿಂದೂ ಬೇರೆ ಹಿಂದುತ್ವ ಬೇರೆ, ಇದನ್ನ ನಮ್ಮ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು" ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಆರ್ಎಸ್ಎಸ್ನವರು ಪ್ರತಿ ಮನೆಗೆ ಭೇಟಿ ನೀಡಿ ಜನರ ತಲೆ ಕೆಡಿಸುತ್ತಿದ್ದಾರೆ. ಕಾಂಗ್ರೆಸ್ ಹಿಂದುತ್ವದ ವಿರೋಧಿ ಎಂದು ಹೇಳುತ್ತಿದ್ದಾರೆ. ಹಿಂದುತ್ವ, ಹಿಂದು ಎರಡು ಒಂದೇ ಅಲ್ಲ" ಎಂದು ಆರ್ಎಸ್ಎಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇನ್ನು "ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೋಮುವಾದ ಭಾವನೆ ಹೆಚ್ಚಾಗಿದ್ದು, ಭಾರತ ಜ್ಯಾತ್ಯಾತೀತ ದೇಶವಾಗಿದೆ. ನಮ್ಮ ರಾಷ್ಟ್ರಕ್ಕೆ ಒಳ್ಳೆದಾಗುವುದನ್ನೇ ಸಂವಿದಾನದಲ್ಲಿ ಸೇರಿಸಿದ್ದಾರೆ. ಹೀಗಾಗಿ ನಮ್ಮ ದೇಶ ಜ್ಯಾತ್ಯಾತೀತ ದೇಶವಾಗಿದೆ. ಭಾರತ ದೇಶ ಒಂದು ಧರ್ಮಕ್ಕೆ ಸೇರಿದ ದೇಶವಲ್ಲ" ಎಂದು ಹೇಳಿದ್ದಾರೆ.