ವಿಜಯಪುರ,ಫೆ.27 (DaijiworldNews/HR): ರಾಜ್ಯ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯ ಸಾರಿಗೆ ಬಸ್ ಟಿಕೆಟ್ ದರವನ್ನು ಕಳೆದ ವರ್ಷವೇ ಹೆಚ್ಚಿಸಲಾಗಿದ್ದು, ಈಗ ಹೆಚ್ಚಳ ಮಾಡುವುದಿಲ್ಲ, ಜೊತೆಗೆ ಈಗ ಕೊರೊನಾದಿಂದಾಗಿ ಜನರು ಸಂಕಷ್ಟಲ್ಲಿದ್ದಾರೆ" ಎಂದರು.
ಇನ್ನು " ಈ ಎಲ್ಲಾ ಕಾರಣಗಳಿಂದ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡುವ ಪ್ರಸ್ತಾವನೆಯೇ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.