ನವದೆಹಲಿ, ಫೆ.27 (DaijiworldNews/PY): ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಂತ-ಕವಿ ರವಿದಾಸ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶನಿವಾರ ಗೌರವ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ವೆಂಕಯ್ಯನಾಯ್ಡು ಅವರು ಟ್ವೀಟ್ ಮಾಡಿದ್ದು," ಮಹಾನ್ ಕವಿ-ಸಂತ ಗುರು ರವಿದಾಸ್ ಜಿ ಅವರ ಜಯಂತಿಯಂದು ನಾನು ನಮಸ್ಕರಿಸುತ್ತೇನೆ. ರವಿದಾಸ್ ಅವರು ಭ್ರಾತೃತ್ವದ ಮೇಲೆ ಅಪಾರ ನಂಬಿಕೆಯಿಟ್ಟಿದ್ದರು. ಅವರು ತಮ್ಮ ಬರಹಗಳು ಹಾಗೂ ಬೋಧನೆಗಳ ಮೂಲಕ ಏಕತೆಯ ಸಂದೇಶವನ್ನು ಸಾರಿದರು. ನಾವು ಅವರನ್ನು ನೆನಪಿಸಿಕೊಳ್ಳುವಂತೆ, ಅವರ ಬೋಧನೆಗಳನ್ನು ಅನುಸರಿಸೋಣ ಹಾಗೂ ಅವರು ತೋರಿಸಿದ ಮಾರ್ಗದಲ್ಲಿ ನಡೆಯಲು ನಿರ್ಧರಿಸೋಣ" ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, "ಸಂತ ರವಿದಾಸ್ ಅವರು ಶತಮಾನಗಳ ಹಿಂದೆ ಸಮಾನತೆ, ಸದ್ಭಾವನೆ ಹಾಗೂ ಸಹಾನುಭೂತಿಯಯ ಕುರಿತು ಸಂದೇಶವನ್ನು ನೀಡಿದರು. ಇದು ದೇಶವಾಸಿಗಳಿಗೆ ಸ್ಪೂರ್ತಿಯಾಗಿದೆ" ಎಂದು ತಿಳಿಸಿದ್ದಾರೆ.