ಹೊಸಪೇಟೆ, ಫೆ.27 (DaijiworldNews/MB) : ವಕೀಲ, ಕಾಂಗ್ರೆಸ್ ಮುಖಂಡ ತಾರಿಹಳ್ಳಿ ವೆಂಕಟೇಶ್ (48) ಅವರನ್ನು ಇಲ್ಲಿನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿಯೇ ಹತ್ಯೆಗೈದ ಘಟನೆ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ತಾರಿಹಳ್ಳಿ ವೆಂಕಟೇಶ್ ಅವರು ನೋಟರಿ ಮಾಡುತ್ತಿದ್ದ ವೇಳೆ ಸಂಬಂಧಿ ಮನೋಜ್ ಎಂಬಾತ ತಾರಿಹಳ್ಳಿ ವೆಂಕಟೇಶ್ ಅವರ ಕುತ್ತಿಗೆಗೆ ಮಚ್ಚಿನಿಂದ ಹೊಡೆದು ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.
ಈ ಕೊಲೆ ಕೌಟುಂಬಿಕ ಕಲಹದ ಕಾರಣದಿಂದಾಗಿ ನಡೆದಿದೆ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಈ ಘಟನೆಯಿಂದ ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಗುಂಪು ಸೇರಿದ ಜನರನ್ನು ಪೊಲೀಸರು ಸ್ಥಳದಿಂದ ತೆರಳಲುವಂತೆ ತಿಳಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.