ವಾಷಿಂಗ್ಟನ್, ಫೆ.27 (DaijiworldNews/HR): ಸೆರಾವೀಕ್ ಗ್ಲೋಬಲ್ ಎನರ್ಜಿ ಆಂಡ್ ಎನ್ವಿರಾನ್ಮೆಂಟ್ ಲೀಡರ್ಷಿಪ್ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ.
ಆನ್ಲೈನ್ ಮೂಲಕ ಮಾರ್ಚ್ 1ರಿಂದ 5ರ ವರೆಗೆ ಸೆರಾವೀಕ್ ಕಾನ್ಫರೆನ್ಸ್-2021 ನಡೆಯಲಿದ್ದು, ಆ ವೇಳೆ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘಟನಾ ಸಂಸ್ಥೆ ಐಎಚ್ಎಸ್ ಮರ್ಕಿಟ್ ತಿಳಿಸಿದೆ.
ಇನ್ನು "ಪರಿಸರ ಹಾಗೂ ಇಂಧನ ಸಂರಕ್ಷಣೆ ಪ್ರಧಾನಿಯಾಗಿ ಮೋದಿ ಅವರು ಮಹತ್ವದ ಕೊಡುಗೆ ನೀಡಿದ್ದು, ಈ ಕ್ಷೇತ್ರದ ನಾಯಕತ್ವವನ್ನು ಅವರು ಸಮರ್ಥವಾಗಿ ನಿರ್ವಹಿಸುವರು ಎಂಬ ವಿಶ್ವಾಸ ಇದೆ. ಅವರು ಹೊಂದಿರುವ ಬದ್ಧತೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ" ಎಂದು ಸಂಸ್ಥೆಯ ವೈಸ್ಚೇರ್ಮನ್ ಡೇನಿಯಲ್ ಯೆರ್ಗಿನ್ ತಿಳಿಸಿದ್ದಾರೆ.