ಬೆಂಗಳೂರು, ಫೆ.27 (DaijiworldNews/PY): "ರಾಜ್ಯದ ಜನರಿಗೆ ಈ ಬಾರಿ ಉತ್ತಮವಾದ ಬಜೆಟ್ ನೀಡುತ್ತೇನೆ. ಅಗತ್ಯ ಸೌಲಭ್ಯಗಳನ್ನು ನೀಡುವುದೇ ನನ್ನ ಗುರಿ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಮ್ಮ 79ನೇ ಹುಟ್ಟುಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ರಾಜ್ಯದ ಜನರು ಸಂಕಷ್ಟಗಳಿಂದ ದೂರವಾಗಿ ಉತ್ತಮ ಜೀವನ ನಡೆಸಬೇಕು ಎನ್ನುವುದು ನನ್ನ ಇಚ್ಛೆ. ಈ ಸಲುವಾಗಿ ಈ ಬಾರಿ ಉತ್ತಮ ಬಜೆಟ್ ನೀಡುವುದು ನನ್ನ ಕರ್ತವ್ಯವಾಗಿದೆ" ಎಂದು ತಿಳಿಸಿದರು.
ಸಿಎಂ ಬಿಎಸ್ವೈ ಅವರ ಕುಟುಂಬದ ಸದಸ್ಯರು ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದು, ಅವರ ಕುಟುಂಬದ ಸದಸ್ಯರು ಚಾಮುಂಡೇಶ್ವರಿ ಪ್ರಸಾದವನ್ನು ನೀಡಿ, ಆರತಿ ಬೆಳಗಿದ್ದಾರೆ.