ನವದೆಹಲಿ, ಫೆ.27 (DaijiworldNews/PY): ದೆಹಲಿಯ ಪ್ರತಾಪ್ ನಗರ ಕಾರ್ಖಾನೆಯೊಂದರಲ್ಲಿ ಶನಿವಾರ ಅಗ್ನಿ ಅನಾಹುತ ಸಂಭವಿಸಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
"ಅಗ್ನಿ ಅನಾಹುತದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಗಾಯಗೊಂಡಿದ್ದು, ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯನ್ನು ನಾವು ತಂದಿದ್ದೇವೆ" ಎಂದು ಅಧಿಕಾರಿಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಮುಂಜಾನೆ 3.47ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 28 ಅಗ್ನಿಶಾಮಕ ಯಂತ್ರಗಳನ್ನು ಅಗ್ನಿನಂದಿಸಲು ಬಳಸಲಾಗಿತ್ತು.
"ಎಲ್ಪಿ ಸಿಲಿಂಡರ್ ಸೋರಿಕೆ ಅವಘಡಕ್ಕೆ ಕಾರಣ" ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ಸುದ್ದಿಸಂಸ್ಥೆ ತಿಳಿಸಿದೆ.