ನವದೆಹಲಿ, ಫೆ.27 (DaijiworldNews/HR): ದೇಶದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೊರೊನಾದ ಕುರಿತು ಆರಂಭದಿಂದಲೂ ನಿಗಾ ಇಟ್ಟಿರುವ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಸಾಂಧರ್ಭಿಕ ಚಿತ್ರ
ಸೆಪ್ಟಂಬರ್ 17ರ ನಂತರದ ಲೆಕ್ಕಾಚಾರದಲ್ಲಿ ನಡೆಸಿದ ಅಧ್ಯಯನದ ಆಧಾರದಲ್ಲಿ ಎಚ್ಚರಿಕೆ ನೀಡಲಾಗಿದೆ.
"ಕಳೆದ ವಾರದ ಪ್ರವೃತ್ತಿ ಸೆಪ್ಟೆಂಬರ್ ಮಧ್ಯಭಾಗದಿಂದ ಈವರೆಗೆ ನೋಡಿದ್ದರಲ್ಲಿ ಕೆಟ್ಟದ್ದಾಗಿದ್ದು, ಆಗ 'ಆರ್' ಮೌಲ್ಯ ದೇಶದಲ್ಲಿ 1ಕ್ಕಿಂತ ಕಡಿಮೆಯಾಗಿತ್ತು. ಆದರೆ ಸೆಪ್ಟೆಂಬರ್ 17ರ ನಂತರ ಇದೇ ಮೊದಲ ಬಾರಿಗೆ 'ಆರ್' ಮೌಲ್ಯ 1ಕ್ಕಿಂತ ಹೆಚ್ಚಾಗಿದೆ" ಎಂದು ಚೆನ್ನೈನ ಗಣಿತವಿಜ್ಞಾನಗಳ ಸಂಸ್ಥೆಯ ಗಣಿತಶಾಸ್ತ್ರಜ್ಞ ಸಿತಾಭ್ರ ಸಿನ್ಹಾ ತಿಳಿಸಿದ್ದಾರೆ.
ಇನ್ನು 'ಆರ್' ಎಂಬುದು ಕೊರೊನಾ ವೈರಸ್ನ ಹರಡುವ ಸಾಮರ್ಥ್ಯದ ಮಾನದಂಡವಾಗಿದ್ದು, ವಿಜ್ಞಾನಿಗಳ ಪ್ರಕಾರ, 1.9ರಷ್ಟು 'ಆರ್' ಮೌಲ್ಯ ಇದ್ದರೆ ಕೊರೊನಾ ಸೋಂಕಿತರು 19 ಮಂದಿಗೆ ಸೋಂಕು ಹರಡಬಲ್ಲರು. ಹೀಗಾಗಿ 'ಆರ್' ಮೌಲ್ಯ 1ಕ್ಕಿಂತ ಕಡಿಮೆ ಇರಬೇಕಿದೆ.