ಚೆನ್ನೈ, ಫೆ.26 (DaijiworldNews/HR): ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ, ಸಿಪಿಐ ರಾಷ್ಟ್ರೀಯ ಸಮಿತಿಯ ಸದಸ್ಯ ಡಿ ಪಾಂಡಿಯಾನ್(88 ) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
1932 ರಲ್ಲಿ ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಬಳಿಯ ಕೀಝವೆಲ್ಲೈಮಲೈಪಟ್ಟಿಯಲ್ಲಿ ಜನಿಸಿದ ಪಾಂಡಿಯಾನ್ 1948ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ದೇಶದಲ್ಲಿ ಕಮ್ಯೂನಿಸ್ಟ್ ಪಾರ್ಟಿಯನ್ನು ನಿಷೇಧಿಸಿದ್ದಾಗ ಪಾಂಡಿಯಾನ್ ಬಂಧನಕ್ಕೊಳಗಾಗಿದ್ದರು ಎನ್ನಲಾಗಿದೆ.
ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮುಗಿಸಿದ ಅವರು ಬಳಿಕ ಅದೇ ವಿಭಾಗದಲ್ಲಿ ಬೋಧಕರಾಗಿ ಕೆಲಸಕ್ಕೆ ಸೇರಿದ್ದು, ಅವರ ಪತ್ನಿ ಜಾಯ್ಸ್ ಅದೇ ವಿಭಾಗದಲ್ಲಿ ಶಿಕ್ಷಕಿಯಾಗಿದ್ದರು.
ಇನ್ನು 1962ರಲ್ಲಿ ತಮ್ಮ ಬೋಧನಾ ಕೆಲಸವನ್ನು ತೊರೆದ ಅವರು ಪಕ್ಷದ ಸಾಹಿತ್ಯ ವಿಭಾಗವನ್ನು ಪೋಷಿಸಲು ಚೆನ್ನೈಗೆ ಸ್ಥಳಾಂತರಗೊಂಡು ಅಲ್ಲಿ ರೈಲ್ವೆ ಮತ್ತು ಬಂದರಿನಲ್ಲಿ ಟ್ರೇಡ್ ಯೂನಿಯನ್ ಕಾರ್ಯಕಾರಿಯಾಗಿಯೂ ಸೇವೆ ಸಲ್ಲಿಸಿದರು.
1989 ಮತ್ತು 1991 ರಲ್ಲಿ ಉತ್ತರ ಚೆನ್ನೈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.