ಹಾಸನ, ಫೆ.26 (DaijiworldNews/PY): "ಜೆಡಿಎಸ್ನಿಂದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರು ತ್ಯಜಿಸಿಲ್ಲ. ಅವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ" ಎಂದು ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್ನಿಂದ ಬಿಡುವ ಪ್ರಶ್ನೆಯೇ ಇಲ್ಲ. ಈ ವಿಚಾರವಾಗಿ ಊಹಾಪೋಹ ಬೇಡ" ಎಂದು ತಿಳಿಸಿದ್ದಾರೆ.
"ಚುನಾವಣೆಯಲ್ಲಿ ಮಧು ಬಂಗಾರಪ್ಪ ಸೋತ ನಂತರ ಅವರು ಒಂದೂವರೆ ವರ್ಷದಿಂದ ಜೆಡಿಎಸ್ ಕಚೇರಿಗೆ ಬರುತ್ತಿಲ್ಲ. ನಾನು ಅವರನ್ನು ಅನೇಕ ಬಾರು ಕರೆದಿದ್ದೇನೆ ಆದರೂ ಅವರು ಬರುತ್ತಿಲ್ಲ. ಮಧು ಬಂಗಾರಪ್ಪ ಅವರನ್ನು ಶಾಸಕರನ್ನಾಗಿ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಅವರ ಪಟ್ಟ ಕಷ್ಟ ಏನೆಂಬುದರ ಬಗ್ಗೆ ತಿಳಿಯಬೇಕು" ಎಂದಿದ್ದಾರೆ.
"ಉತ್ತರ ಕರ್ನಾಟಕ ಸೇರಿದಂತೆ ಯಾದಗಿರಿ ಹಾಗೂ ಹೈದರಾಬಾದ್ ಕರ್ನಾಟಕಗಳಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹಿಳಾ ಕಾರ್ಯಕರ್ತರ ಸಮಾವೇಶ ಸೇರಿದಂತೆ ರ್ಯಾಲಿಗಳನ್ನು ಆಯೋಜನೆ ಮಾಡುವುದಾಗಿ" ತಿಳಿಸಿದ್ದಾರೆ.