ಪುದುಚೇರಿ, ಫೆ. 25 (DaijiworldNews/SM): ಸುಮಾರು 30 ವರ್ಷಗಳ ನಂತರ ಮತ್ತೊಮ್ಮೆ ಪುದುಚೇರಿಯಲ್ಲಿ ರಾಷ್ಟ್ರಪತಿಗಳ ಆಳ್ವಿಕೆ ಜಾರಿಯಾಗಿದೆ. ಆ ಮೂಲಕ ಏಳನೇ ಬಾರಿ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾದಂತಾಗಿದೆ.
ಐದು ಶಾಸಕರ ರಾಜೀನಾಮೆಯಿಂದ ಪುದುಚೇರಿಯಲ್ಲಿ ಕಾಂಗ್ರೆಸ್ ಆಡಳಿತ ಕಳೆದುಕೊಂಡಿದೆ. ವಿ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿದೆ. ವಿಧಾನಸಭೆಯಲ್ಲಿ ಸದಸ್ಯ ಬಲ ಕಡಿಮೆಯಾದ ಹಿನ್ನೆಲೆಯಲ್ಲಿ ಫೆಬ್ರವರಿ 22ರಂದು ಕಾಂಗ್ರೆಸ್ ಸರ್ಕಾರ ವಿಶ್ವಾಸ ಕಳೆದುಕೊಂಡಿತ್ತು.
ಇನ್ನು ಈ ಹಿಂದೆ ಪುದುಚೇರಿಯಲ್ಲಿ ಸೆಪ್ಟೆಂಬರ್ 18, 1968 ರಿಂದ 17 ನೇ ಮಾರ್ಚ್ 1969 ರವರೆಗೆ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿತ್ತು. ನಂತರ ಜನವರಿ 3, 1974 ರಿಂದ ಮಾರ್ಚ್ 6, 1974 ರವರೆಗೆ ಎರಡನೇ ಬಾರಿಗೆ, ಮಾರ್ಚ್ 28, 1974 ರಿಂದ ಜುಲೈ 2 1977 ರವರೆಗೆ, 1978 ರ ನವೆಂಬರ್ 12 ರಿಂದ 1980 ರ ಜನವರಿ 16 ರವರೆಗೆ, 1983 ರ ಜೂನ್ 24 ರಿಂದ ಮಾರ್ಚ್ 16 ರವರೆಗೆ 1985 ಮತ್ತು ಮಾರ್ಚ್ 4, 1991 ರಿಂದ ಜುಲೈ 3 ರವರೆಗೆ 1991 ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು. ಇದೀಗ ಮತ್ತೊಮ್ಮೆ ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿದೆ.