ವಾಶಿಮ್, ಫೆ. 25 (DaijiworldNews/HR): ಸರ್ಕಾರಿ ಶಾಲೆಯ ಹಾಸ್ಟೆಲ್ವೊಂದರಲ್ಲಿ 299 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
"ಭಾವನಾ ಪಬ್ಲಿಲ್ ಸ್ಕೂಲ್ನ ಹಾಸ್ಟೆಲ್ನಲ್ಲಿ ವಿವಿಧ ಜಿಲ್ಲೆಯ ಒಟ್ಟು 327 ವಿದ್ಯಾರ್ಥಿಗಳು ನೆಲೆಸಿದ್ದು, ಈ ಹಾಸ್ಟೆಲ್ನ 229 ವಿದ್ಯಾರ್ಥಿಗಳು ಮತ್ತು ಶಾಲೆಯ ನಾಲ್ಕು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು "ವಿದ್ಯಾರ್ಥಿಗಳು ಫೆಬ್ರುವರಿ 14 ರಂದು ಹಾಸ್ಟೆಲ್ಗೆ ಮರಳಿದ್ದು, ಪ್ರಾರಂಭದ ಕೆಲ ವಾರಗಳಲ್ಲಿ 21 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ" ಎಂದು ರಿಸೋದ್ ತಹಶೀಲ್ದಾರ್ ಅಜಿತ್ ಶೆಲಾರ್ ಹೇಳಿದ್ದಾರೆ.