ನವದೆಹಲಿ, ಫೆ. 25 (DaijiworldNews/HR): "ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವಹಿವಾಟಿನ ವ್ಯವಹಾರಗಳನ್ನು ನೀಡುವ ಮೇಲಿನ ನಿರ್ಬಂಧವನ್ನು ಕೇಂದ್ರ ತೆಗೆದುಹಾಕಿದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "'ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವ್ಯವಹಾರವನ್ನು ನೀಡುವುದರ ಮೇಲಿದ್ದ ನಿರ್ಬಂಧವನ್ನು ತೆಗೆದುಹಾಕಲಾಗಿದ್ದು, ಎಲ್ಲಾ ಬ್ಯಾಂಕುಗಳು ಈಗ ಭಾಗವಹಿಸಬಹುದು ಎನ್ನುವುದು ಖಚಿತವಾಗಿದೆ" ಎಂದು ತಿಳಿಸಿದ್ದಾರೆ.
ಬುಧವಾರ ಸರ್ಕಾರ ತೆಗೆದುಕೊಂಡ ನಿರ್ಧಾರವು ಎಲ್ಲಾ ಖಾಸಗಿ ವಲಯದ ಬ್ಯಾಂಕುಗಳಿಗೆ ಈ ಕಾರ್ಯಾಚರಣೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಹಣಕಾಸು ಸಚಿವಾಲಯವು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ ಎನ್ನಲಾಗಿದೆ.
ಇನ್ನು ಈ ನಿರ್ಧಾರವು ಖಾಸಗಿ ಬ್ಯಾಂಕುಗಳನ್ನು "ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರನ್ನಾಗಿ ಮಾಡುತ್ತದೆ" ಎಂದು ಸಚಿವಾಲಯು ತಿಳಿಸಿದೆ.