ಬೆಂಗಳೂರು, ಫೆ.25 (DaijiworldNews/MB) : ಕರ್ನಾಟಕದ ಭಾರತೀಯ ಜನತಾ ಪಕ್ಷ(ಬಿಜೆಪಿ) ಘಟಕ ಹೊಸ ವಕ್ತಾರರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು ಮಂಗಳೂರು ವಿಭಾಗದ ಮುಖ್ಯ ವಕ್ತಾರರಾಗಿ ಕ್ಯಾ. ಗಣೇಶ್ ಕಾರ್ಣಿಕ್ ಅವರು ಹಾಗೂ ಬೆಂಗಳೂರು ವಿಭಾಗದ ವಕ್ತಾರರಾಗಿ ನಟ ಜಗ್ಗೇಶ್ ಅವರು ನೇಮಕಗೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನವರಸ ನಾಯಕ ಜಗ್ಗೇಶ್ ಅವರು, ''ನನಗೆ ರಾಜ್ಯ ಭಾಜಪ ವಕ್ತಾರನಾಗಿ ನೇಮಸಿದ ಪಕ್ಷದ ಹಿರಿಯರಿಗೆ ಧನ್ಯವಾದ. ಕಾಯವಾಚಮನ ಶುದ್ಧಾತ್ಮನಾಗಿ ಕಾಯಕಮಾಡುವೆ'' ಎಂದು ತಿಳಿಸಿದ್ದಾರೆ. ಹಾಗೆಯೇ 2021 ರಿಂದ 2023 ರವರೆಗೆ ರಾಜ್ಯ ವಕ್ತಾರರಾಗಿರುವವರ ಪಟ್ಟಿಯನ್ನು ಉಲ್ಲೇಖಿಸಿದ್ದಾರೆ.
ಬಿಜೆಪಿ ವಕ್ತಾರರ ನೇಮಕ:
ಕ್ಯಾ. ಗಣೇಶ್ ಕಾರ್ಣಿಕ್ -ಮಂಗಳೂರು
ಜಗ್ಗೇಶ್ - ಬೆಂಗಳೂರು
ರಾಜೂಗೌಡ(ನರಸಿಂಹ ನಾಯಕ್) - ಯಾದಗಿರಿ
ಚಲವಾದಿ ನಾರಾಯಣ ಸ್ವಾಮಿ - ಬೆಂಗಳೂರು
ರಾಜಕುಮಾರ್ ಪಾಟೀಲ್ ತೆಲ್ಕೂರ - ಕಲಬುರಗಿ
ತೇಜಸ್ವಿನಿ ಗೌಡ - ಬೆಂಗಳೂರು
ಗಿರಿಧರ ಉಪಾಧ್ಯಾಯ - ಬೆಂಗಳೂರು
ಪಿ ರಾಜೀವ್ - ಬೆಳಗಾವಿ
ಎಂ. ಬಿ ಜಿರಲಿ - ಬೆಳಗಾವಿ
ಮಹೇಶ್ -ಮೈಸೂರು