ಪಶ್ಚಿಮ ಬಂಗಾಳ, ಫೆ.24 (DaijiworldNews/PY): ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, "ಪ್ರಧಾನಿ ಮೋದಿ ದೊಡ್ಡ ಗಲಭೆಕೋರ" ಎಂದಿದ್ದಾರೆ.
ಬುಧವಾರ ಹೂಗ್ಲಿ ಜಿಲ್ಲೆಯ ಸಹಗಂಜ್ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಪ್ರಧಾನಿ ಮೋದಿ ಅವರು ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ. ದೇಶದಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಸುಳ್ಳು ಹಾಗೂ ದ್ವೇಷವನ್ನು ಹಬ್ಬಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಹಿಂಸಾಚಾರದಿಂದ ಯಾವುದೇ ರೀತಿಯಾದ ಲಾಭ ಗಳಿಸಲು ಆಗುವುದಿಲ್ಲ" ಎಂದು ಹೇಳಿದ್ದಾರೆ.
"ನಾನು ವಿಧಾನಸಭೆ ಚುನಾವಣೆಯಲ್ಲಿ ಗೋಲ್ಕೀಪರ್ ಆಗಿರುತ್ತೇನೆ. ಆದರೆ, ನೀವು ಒಂದೇ ಒಂದು ಗೋಲ್ ಅನ್ನು ಗಳಿಸಲು ಆಗುವುದಿಲ್ಲ. ಫುಟ್ಬಾಲ್ನಲ್ಲಿ ಎಲ್ಲಾ ಶಾಟ್ಗಳು ಗೋಲ್ಪೋಸ್ಟ್ ಮೇಲೆ ಹೋದಂತೆ ನಿಮ್ಮ ಸ್ಥಿತಿಯು ಹೀಗೆ ಆಗಲಿದೆ" ಎಂದು ಲೇವಡಿ ಮಾಡಿದ್ದಾರೆ.
"ಸಿಬಿಐಯು ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿಯ ವಿಚಾರಣೆ ಮಾಡಿದೆ. ಈ ವಿಚಾರ ಖಂಡನೀಯ. ನಮ್ಮ ಮಹಿಳೆಗೆ ಮಾಡಿದ ಅನ್ಯಾಯವಾಗಿದೆ" ಎಂದು ಕಿಡಿಕಾರಿದ್ದಾರೆ.
ರ್ಯಾಲಿಯಲ್ಲಿ ಕ್ರಿಕೆಟ್ ಆಟಗಾರ ಮನೋಜ್ ತಿವಾರಿ ಸೇರಿದಂತೆ ಹಲವು ಬಂಗಾಳಿ ನಟರು ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾದರು.