ಕೋಲ್ಕತಾ, ಫೆ.24 (DaijiworldNews/MB) : ಪಶ್ಚಿಮ ಬಂಗಾಳದ ರೈಲು ನಿಲ್ದಾಣದಲ್ಲಿದ್ದ ಸಚಿವರ ಮೇಲೆ ಬಾಂಬ್ ದಾಳಿಯಾಗಿ ಓರ್ವ ಮೃತಪಟ್ಟು, ಹಲವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ, ಬಾಂಗ್ಲಾ ಪ್ರಜೆ ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ.
ಬಂಗಾಳ ಕಾರ್ಮಿಕ ಸಚಿವ ಜಾಕಿರ್ ಹುಸೇನ್ ಅವರು ಪ್ಲಾಟ್ ಫಾರಂ ಸಂಖ್ಯೆ 2ರಲ್ಲಿ ರೈಲಿಗಾಗಿ ಕಾಯುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಆಡಳಿತಾರೂಢ ಟಿಎಂಸಿ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಹುಸೇನ್ ಸೇರಿದಂತೆ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಈ ದಾಳಿಗೆ ಸಂಬಂಧಿಸಿ ಶಂಕಿತ ಬಾಂಗ್ಲಾದೇಶದ ಪ್ರಜೆಯೊಬ್ಬನನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಯನ್ನು ಬಂಗಾಳ ಸಿಐಡಿ ವಶಕ್ಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.