ಕೋಲ್ಕತ್ತ, ಫೆ.24 (DaijiworldNews/PY): ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಹೊಸ ಯಾತ್ರೆಯೊಂದು ಇಂದಿನಿಂದ ಆರಂಭವಾಗಲಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಸಹಕಾರವನ್ನು ಬಯಸುತ್ತೇನೆ. ಇಂದಿನಿಂದ ಇದು ನನ್ನ ರಾಜಕೀಯ ಯಾತ್ರೆಯ ಪ್ರೊಫೈಲ್ ಆಗಲಿದೆ" ಎಂದಿದ್ದಾರೆ.
ಈ ಹಿಂದೆ ಮನೋಜ್ ತಿವಾರಿ ಅವರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ದ ಹಾಗೂ ರೈತರ ಪ್ರತಿಭಟನೆಯ ಪರವಾಗಿ ಟ್ವೀಟ್ ಮಾಡಿದ್ದು, ಸುದ್ದಿಯಾಗಿದ್ದರು.