ನವದೆಹಲಿ, ಫೆ.24 (DaijiworldNews/PY): ಕೊರೊನಾ ಸಂಕಷ್ಟದ ಸಂದರ್ಭ ಕಳೆದ ವರ್ಷ ತಮ್ಮ ಕೊನೆಯ ಅವಕಾಶವನ್ನು ಕಳೆದುಕೊಂಡ ಯುಪಿಎಸ್ಸಿ ಆಕಾಂಕ್ಷಿತರು ಇನ್ನೊಂದು ಅವಕಾಶ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
ಕೊರೊನಾ ಕಾರಣದಿಂದ ಅಕ್ಟೋಬರ್ 2020ರ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಸಾಧ್ಯವಾಗದೇ ಕೊನೆಯ ಅವಕಾಶವನ್ನು ಕಳೆದುಕೊಂಡವರಿಗೆ ಮತ್ತೊಂದು ಅವಕಾಶವನ್ನು ನೀಡುವಂತೆ ಕೋರಿ ಯುಪಿಎಸ್ಸಿ ನಾಗರಿಕ ಸೇವಾ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಯನ್ನು ರದ್ದುಪಡಿಸುತ್ತಿರುವುದಾಗಿ ನ್ಯಾ. ಖಾನ್ವಿಲ್ಕರ್ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿದೆ.
"ಕೊರೊನಾ ಕಾರಣದಿಂದ ಕಳೆದ ವರ್ಷ ತಮ್ಮ ಕೊನೆಯ ಅವಕಾಶ ಕಳೆದುಕೊಂಡವರು ಸೇರಿದಂತೆ ಯುಪಿಎಸ್ಸಿ ಆಕಾಂಕ್ಷಿತರ ವಯೋಮಿತಿಯಲ್ಲಿ ವಿನಾಯತಿ ನೀಡಿದರೆ ಇತರೆ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಿದಂತೆ ಆಗುತ್ತದೆ" ಎಂದು ಫೆ.9ರಂದು ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ತಿಳಿಸಿತ್ತು.
"ತಮ್ಮ ಕಡೆ ಅವಕಾಶವನ್ನು ಕಳೆದುಕೊಂಡ ವಯೋಮಿತಿ ಮೀರದ ಅಭ್ಯರ್ಥಿಗಳಿಗೆ ಈ ವರ್ಷ ಒಂದು ಅವಕಾಶ ಸಿಗುತ್ತದೆ" ಎಂದು ಕೇಂದ್ರ ಸರ್ಕಾರ ತಿಳಿಸಿದೆ.