ಮಥುರಾ, ಫೆ.24 (DaijiworldNews/MB) : ಕಾರೊಂದಕ್ಕೆ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿ ಒಟ್ಟು 7 ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಮಥುರಾ ಬಳಿಯ ಯಮುನಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ನಡೆದಿದೆ.
ಆಗ್ರಾ ಕಡೆಯ ಆಯಿಲ್ ಟ್ಯಾಂಕರ್ ತೆರಳುತ್ತಿತ್ತು ಎಂದು ವರದಿಯಾಗಿದೆ. ಆಯಿಲ್ ಟ್ಯಾಂಕರ್ ಡಿವೈಡರ್ಗೆ ಡಿಕ್ಕಿ ಹೊಡೆದು ಈ ವೇಳೆ ಟ್ಯಾಂಕರ್ ಮತ್ತು ಡಿವೈಡರ್ ನಡುವೆ ಕಾರು ಬಂದಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಥುರಾ ಪೊಲೀಸ್ ಅಧಿಕಾರಿಗಳು, ಆಯಿಲ್ ಟ್ಯಾಂಕರ್ ಕಾರಿನ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.