ನಾಗಪುರ, ಫೆ.23 (DaijiworldNews/PY): ಬಾಂಬೆ ಹೈಕೋರ್ಟ್ನ ನಾಗಪುರ ಪೀಠವು ಸಾಮಾಜಿಕ ಕಾರ್ಯಕರ್ತ, ಕವಿ ವರವರ ರಾವ್ ಅವರಿಗೆ 2016ರ ಸೂರಜ್ ಕಬ್ಬಿಣ ಅದಿರು ಗಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪರಿಸ್ಥಿತಿ ಆಧಾರದಲ್ಲಿ ಜಾಮೀನು ನೀಡಿದೆ.
ಫೆಬ್ರವರಿ 2019ರಲ್ಲಿ ಗಡಚಿರೋಲಿ ಠಾಣೆ ಪೊಲೀಸರು ವರವರ ರಾವ್ ಹಾಗೂ ವಕೀಲ ಸುರೇಂದ್ರ ಗದ್ಲಿಂಗ್ ಅವರನ್ನು ಬಂಧಿಸಿದ್ದರು. ನಾಗಪುರ ಪೀಠದ ನ್ಯಾಯಮೂರ್ತಿ ಸ್ವಪ್ನಾ ಜೋಷಿ ಅವರು ಜಾಮೀನು ನೀಡಿದರು. ಇದೇ ಕಾರಣವನ್ನು ಆಧರಿಸಿ ವರವರ ರಾವ್ ಅವರಿಗೆ ಬಾಂಬೆ ಹೈಕೋರ್ಟ್ ಸೋಮವಾರ ಎಲ್ಗರ್ ಪರಿಷತ್ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಜಾಮೀನು ನೀಡಿತ್ತು.
"ವರವರ ರಾವ್ ಅವರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆ ಅವರಿಗೆ ವೈದ್ಯಕೀಯ ಪರಿಸ್ಥಿತಿ ಆಧಾರದಲ್ಲಿ ಜಾಮೀನು ನೀಡಬೇಕು" ಎಂದು ವಕೀಲರಾದ ಫಿರ್ದೋಸ್ ಮಿರ್ಜಾ ಹಾಗೂ ನಿಹಾಲ್ಸಿಂಗ್ ಮನವಿ ಮಾಡಿದ್ದರು.