ನವದೆಹಲಿ, ಫೆ.23 (DaijiworldNews/PY): ಟೂಲ್ ಕಿಟ್ ಪ್ರಕರಣದಲ್ಲಿ ಬಂಧಿತರಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ದಿಶಾ ರವಿಗೆ ದೆಹಲಿ ಪಟಿಯಾಲ ಹೌಸ್ ಕೋರ್ಟ್ ತಲಾ ಒಂದು ಲಕ್ಷ ರೂ. ಶ್ಯೂರಿಟಿ ಜೊತೆ ಜಾಮೀನು ಮಂಜೂರು ಮಾಡಿದೆ.
ನಿನ್ನೆಗೆ ದಿಶಾ ರವಿ ಅವರ ಮೂರು ದಿನಗಳ ನ್ಯಾಯಾಂಗ ಬಂಧನ ಮುಕ್ತಾಯವಾಗಿದ್ದು, ಈ ಹಿನ್ನೆಲೆ ಆರೋಪಿಯನ್ನು ಕೋರ್ಟ್ ಮತ್ತೆ ಒಂದು ದಿನ ದೆಹಲಿ ಪೊಲೀಸರ ವಶಕ್ಕೆ ನೀಡಿತ್ತು.
ಕಳೆದ ವಾರ ಬೆಂಗಳೂರಿನ ಮನೆಯಿಂದ ಬಂಧಿಸಲ್ಪಟ್ಟಿದ್ದ ದಿಶಾ ರವಿ, ನಿಕಿತಾ ಜಾಕೋಬ್ ಹಾಗೂ ಶಾಂತನು ಮುಲುಕ್ ಅವರು ಟೂಲ್ ಕಿಟ್ ರಚನೆ ಮಾಡುವ ಸಲುಬಾಗಿ ಖಲಿಸ್ತಾನ ಪರ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಸಂಘಟನೆಯ ಜೊತೆ ಸಹಕರಿಸದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು.
ವಾದ-ವಿವಾದವನ್ನು ಆಲಿಸಿದ ದೆಹಲಿ ಪಡಿಯಾಲ ಹೌಸ್ ಕೋರ್ಟ್, ಜಾಮೀನು ಅರ್ಜಿಯ ತೀರ್ಪನ್ನು ಫೆ.23ಕ್ಕೆ ಕಾಯ್ದಿರಿಸಿತ್ತು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಹೇಗೆ ಬೆಂಬಲ ನೀಡಬೇಕು ಎನ್ನುವುದನ್ನು ವಿವರಿಸುವ ಟೂಲ್ ಕಿಟ್ ಅನ್ನು ಸಿದ್ದಪಡಿಸಿ, ಅಂತರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರಿಗೆ ಅದನ್ನು ಕಳುಹಿಸಿರುವ ಆರೋಪದ ಮೇರೆಗೆ ಫೆ.13ರಂದು ದಿಶಾ ರವಿ ಅವರನ್ನು ಬಂಧಿಸಲಾಗಿತ್ತು.