ಮೈಸೂರು, ಫೆ.23 (DaijiworldNews/MB) : 12ರ ಬಾಲಕನೋರ್ವನ ಮೇಲೆ ಚಿರತೆ ದಾಳಿ ಮಾಡಿದ ವೇಳೆ ಬಾಲಕ ಚಿರತೆಯ ಕಣ್ಣಿಗೆ ತಿವಿದು ತಪ್ಪಿಸಿಕೊಂಡ ಘಟನೆ ತಾಲ್ಲೂಕಿನ ಕಡಕೊಳ ಸಮೀಪದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ನಂದನ್ ಕುಮಾರ್ (12) ಚಿರತೆಯ ಬಾಯಿಂದ ತಪ್ಪಿಸಿಕೊಂಡ ಬಾಲಕ.
ಬಾಲಕ ಜಮೀನಿನಲ್ಲಿನ ಹಸುವಿಗೆ ಹುಲ್ಲು ಹಾಕಲು ತೆರಳುತ್ತಿದ್ದಾಗ ಚಿರತೆ ದಾಳಿ ಮಾಡಿದ್ದು ಬಾಲಕನ ಕುತ್ತಿಗೆ, ತೋಳಿಗೆ ಪರಚಿ ಗಾಯಗೊಳಿಸಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬಾಲಕನಿಗೆ ಚಿರತೆ ದಾಳಿ ನಡೆಸಿದ ವೇಳೆ ಬಾಲಕನು ಚೊರತೆಯ ಕಣ್ಣಿಗೆ ತನ್ನ ಬೆರಳಿನಿಂದ ತಿವಿದಿದ್ದು, ಕೂಡಲೇ ಚಿರತೆ ಬಾಲಕನನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದೆ ಎನ್ನಲಾಗಿದೆ.