ಬೆಂಗಳೂರು, ಫೆ.23 (DaijiworldNews/MB) : ''ಚಿಕ್ಕಬಳ್ಳಾಪುರ ಜಿಲೇಟಿನ್ ಸ್ಫೋಟದಲ್ಲಿ 6 ಅಮಾಯಕ ಜೀವಗಳ ಬಲಿಗೆ ಬಿಜೆಪಿ ಸರ್ಕಾರದ ಅಸಡ್ಡೆಯೇ ಕಾರಣ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.
ಅಕ್ರಮವಾಗಿ ಜಿಲೆಟಿನ್ ಸಾಗಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿ, ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹಿರೇನಾಗವೇಲಿ ಗ್ರಾಮದ ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, ''ಚಿಕ್ಕಬಳ್ಳಾಪುರ ಜಿಲೇಟಿನ್ ಸ್ಫೋಟದಲ್ಲಿ 6 ಅಮಾಯಕ ಜೀವಗಳ ಬಲಿಗೆ ಬಿಜೆಪಿ ಸರ್ಕಾರದ ಅಸಡ್ಡೆಯೇ ಕಾರಣ. ಒಂದೇ ತಿಂಗಳಲ್ಲಿ ಎರಡನೇ ಬಾರಿ ಇಂತಹ ದುರ್ಘಟನೆ ನಡೆದಿದ್ದು, ಆಂತರಿಕ ಸಮಸ್ಯೆಯಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಮೈಮರೆತಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ತಪ್ಪಿತಸ್ಥರ ವಿರುದ್ಧ ನಿಜವಾಗಿಯೂ ಕಠಿಣ ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿದ್ದಾರೆ.