ನವದೆಹಲಿ, ಫೆ.23 (DaijiworldNews/MB) : ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದ್ದು ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 25 ಪೈಸೆ ಮತ್ತು ಡೀಸೆಲ್ ದರದಲ್ಲಿ 35 ಪೈಸೆ ಹೆಚ್ಚಳವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 90.83 ರೂ. ಗೆ, ಡೀಸೆಲ್ ದರ ಕೂಡ 81.32ರೂ ಹೆಚ್ಚಳವಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 93.95 ರೂಗೆ, ಡಿಸೇಲ್ ದರ 86.19 ರೂ. ಏರಿಕೆಯಾಗಿದೆ.
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 97.32 ರೂ. ಹಾಗೂ ಡೀಸೆಲ್ ದರ 88.42ರೂ. ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ 92.88 ರೂಗೆ ಮತ್ತು ಡೀಸೆಲ್ 86.29 ರೂ., ಕೋಲ್ಕತಾದಲ್ಲಿ ಪ್ರತೀ ಲೀಟರ್ ಪೆಟ್ರೋಲ್ 91.1 ರೂ.ಗೆ ಮತ್ತು ಡೀಸೆಲ್ 84.18 ರೂ.ಗೆ ಏರಿದೆ.