ಮುಂಬೈ, ಫೆ.22 (DaijiworldNews/HR): ಟಿಕ್ಟಾಕ್ ಸ್ಟಾರ್ ಸಮೀರ್ ಗಾಯಕ್ವಾಡ್(22 ) ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸಮೀರ್ ಗಾಯಕ್ವಾಡ್ ಅವರು ಇನ್ಸ್ಟಾಗ್ರಾಂನಲ್ಲಿ ಸುಮಾರು 2,73,090 ಜನ ಹಿಂಬಾಲಕರನ್ನು ಹೊಂದಿದ್ದು, ಟಿಕ್ಟಾಕ್ ಬ್ಯಾನ್ ನಂತರ ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಅಭಿಮಾನಿಗಳನ್ನು ತಲುಪುತ್ತಿದ್ದರು ಎನ್ನಲಾಗಿದೆ.
ಇದೀಗ ಅನೇಕ ಅಭಿಮಾನಿಗಳನ್ನೂ ಗಳಿಸಿದ್ದ ಸಮೀರ್ ಅವರ ದಿಢೀರ್ ಸಾವು ಅಭಿಮಾನಿಗಳಲ್ಲಿ ಆತಂಕ ಉಂಟು ಮಾಡಿದೆ.
ಇನ್ನು ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆಯೇ ಕಂಡುಬರುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821