ಮುಂಬೈ, ಫೆ.22 (DaijiworldNews/MB) : ದಾದ್ರಾ ಹಾಗೂ ನಗರ್ ಹವೇಲಿ ಸಂಸದ, ಭಾರತೀಯ ನವಶಕ್ತಿ ಪಕ್ಷದವರಾಗಿದ್ದ ಮೋಹನ್ ದೇಲ್ಕರ್ (58) ಅವರು ದಕ್ಷಿಣ ಮುಂಬೈನ ಹೋಟೆಲ್ವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ದಕ್ಷಿಣ ಮುಂಬೈನ ಮರೈನ್ ಡ್ರೈವ್ನಲ್ಲಿನ ಸೀ ಗ್ರೀನ್ ಹೋಟೆಲ್ನಲ್ಲಿ ಅವರು ಮೃತ ದೇಹ ಪತ್ತೆಯಾಗಿದ್ದು ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಇನ್ನು ಗುಜರಾತಿ ಭಾಷೆಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಕೂಡಾ ಮಾಧ್ಯಮಗಳು ವರದಿ ಮಾಡಿದೆ. ಈ ನಿಗೂಢ ಸಾವಿನಿಂದ ಹಲವು ಅನುಮಾನಗಳೂ ಮೂಡಿವೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮೋಹನ್ ದಾದರ್ ನಗರ ಹವೇಲಿಯಿಂದ ಏಳು ಬಾರಿ ಸಂಸದರಾಗಿದ್ದು ಈ ಹಿಂದೆ ಕಾಂಗ್ರೆಸ್ನಲ್ಲಿದ್ದರು. 2019 ರಲ್ಲಿ ಕಾಂಗ್ರೆಸ್ ತೊರೆದು ಜೆಡಿಯು ಬೆಂಬಲದಿಂದ ಪಕ್ಷೇತರರಾಗಿ ಗೆದ್ದಿದ್ದರು.