ರಾಯಚೂರು, ಫೆ.22 (DaijiworldNews/MB) : ತನ್ನ ಅಪ್ರಾಪ್ತೆ ಪುತ್ರಿಯನ್ನು ತಂದೆಯೇ ಕೊಡಲಿಯಿಂದ ಕೊಚ್ಚಿ ಹತ್ಯೆಗೈದ ಅಮಾನುಷ ಘಟನೆ ಹಟ್ಟಿ ಸಮೀಪದ ಯರಜಂತಿಯಲ್ಲಿ ನಡೆದಿದೆ.
ಹತ್ಯೆಯಾದ ಬಾಲಕಿ ಮೋನಮ್ಮ (14). ಆರೋಪಿ ತಂದೆ ತಿಮ್ಮಯ್ಯ.
ಇನ್ನು ತಂದೆ ತನ್ನ ಪುತ್ರಿಯನ್ನು ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಪುತ್ರಿಯು ಮನೆಯ ಮುಂಭಾದಲ್ಲಿ ಪಾತ್ರೆ ತೊಳೆಯುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ತಂದೆ ಕೊಡಲಿಯಿಂದ ಆಕೆಯ ಕುತ್ತಿಗೆಗೆ ಕೊಚ್ಚಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಆದರೆ ಈ ಕೊಲೆಗೆ ನಿಖರ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಹಟ್ಟಿ ಠಾಣೆಯ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.