ಬೆಂಗಳೂರು, ಫೆ.22 (DaijiworldNews/HR): ಕರ್ನಾಟಕದಲ್ಲಿ ರೂಪಾಂತರಗೊಂಡ ಕೊರೊನಾ ಸೋಂಕು ಯಾರಲ್ಲಿಯೂ ಸದ್ಯಕ್ಕೆ ಕಾಣಿಸಿಕೊಂಡಿಲ್ಲ ಎಂದು ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ವಿ.ರವಿ ಸ್ಪಷ್ಟಪಡಿಸಿದ್ದಾನೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾತನಾಡಿದ ಅವರು, "ಯಾರಲ್ಲೂ ಬ್ರಿಟನ್, ಬ್ರೆಜಿಲ್ ಅಥವಾ ದಕ್ಷಿಣ ಆಫ್ರಿಕಾ ಮಾದರಿಯ ಸೋಂಕು ಇರುವುದು ಪತ್ತೆಯಾಗಿಲ್ಲ, ಉಳಿದಂತೆ ಮಂಗಳೂರು ಅಥವಾ ಇನ್ನಾವುದೇ ಕ್ಲಸ್ಟರ್ಗಳಲ್ಲಿ ಸೋಂಕಿತರಾದ ಯಾರಲ್ಲೂ ಸಿ.ಟಿ ಮೌಲ್ಯ 20ಕ್ಕಿಂತ ಕಡಿಮೆ ಇಲ್ಲ. ಹೀಗಾಗಿ ಹೆಚ್ಚಿನ ಪರೀಕ್ಷೆಗೆ ಕಳಹಿಸಿಲ್ಲ. ಕಳುಹಿಸುವ ಅಗತ್ಯವೂ ಇಲ್ಲ" ಎಂದರು.
ಇನ್ನು "ಕೊರೊನಾ ಪರೀಕ್ಷೆ ಕಡಿಮೆ ಮಾಡದಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದ್ದು, ಸೋಂಕು ಹರಡುವ ಪ್ರಮಾಣ ರಾಜ್ಯದಲ್ಲಿ ಶೇ 1ಕ್ಕಿಂತ ಕಡಿಮೆ ಇರುವ ಕಾರಣ ಭಯಪಡುವ ಅಗತ್ಯ ಇಲ್ಲ. ಆದರೆ, ನಿರ್ಲಕ್ಷ್ಯ ವಹಿಸಿದರೆ ಮಹಾರಾಷ್ಟ್ರ ಮತ್ತು ಕೇರಳದಿಂದ ಸೋಂಕು ಹರಡುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆ ವಹಿಸಲೇಬೇಕು" ಎಂದಿದ್ದಾರೆ.
ಕೊರೊನಾ ಸೋಂಕಿನಿಂದ ದೂರ ಇರಲು ಎರಡು ಮಾರ್ಗಗಳಿದ್ದು, ಒಂದು ಮಾಸ್ಕ್ ಧರಿಸುವುದು ಮತ್ತು ಅಂತರ ಕಾಪಾಡುವುದು ಇನ್ನೊಂದು ಲಸಿಕೆ ಪಡೆಯುವುದು ಎಂದು ಹೇಳಿದ್ದಾರೆ.