ಕೋಲ್ಕತಾ, ಫೆ.22 (DaijiworldNews/HR): ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿಯವರ ಪತ್ನಿಯ ಸೋದರಿ ಮೇನಕಾ ಗಂಭೀರ್ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯವರ ಪತ್ನಿಗೆ ಈ ಮೊದಲು ವಿಚಾರಣೆಗೆ ಬರುವಂತೆ ಸಿಬಿಐ ತಿಳಿಸಿದ್ದು, ಇದೀಗ ಪತ್ನಿಯ ಸೋದರಿಗೂ ಸಿಬಿಐ ಸಮನ್ಸ್ ನೀಡಿದ್ದು, ಇಡೀ ಕುಟುಂಬಕ್ಕೆ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ ಸುತ್ತಿಕೊಂಡಿದೆ ಎನ್ನಲಾಗಿದೆ.
ಇನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವುದಾಗಿ ರುಜೀರಾ ಬ್ಯಾನರ್ಜಿ ಸಿಬಿಐಗೆ ತಿಳಿಸಿದ್ದಾರೆ.