ಬಲ್ಲಿಯಾ, ಫೆ.22 (DaijiworldNews/HR): ಉತ್ತರ ಪ್ರದೇಶದಲ್ಲಿ ಮೈಮರೆತು ಫೇಸ್ಬುಕ್ ಲೈವ್ ಮಾಡುತ್ತಿದ್ದ ವೇಳೆ ಬೋಟ್ ಮಗುಚಿ ಇಬ್ಬರು ಯುವಕರು ನೀರುಪಾಲಾದ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಮೃತ ಯುವಕರನ್ನು ಅನೂಜ್ ಗುಪ್ತಾ(25) ಮತ್ತು ದೀಪಕ್ ಗುಪ್ತಾ ಎಂದು ಗುರುತಿಸಲಾಗಿದೆ.
ದ್ವೀಪವೊಂದಕ್ಕೆ ಬೋಟ್ನಲ್ಲಿ ಮೈರಿತಾರ್ ಗ್ರಾಮದ 6 ಮಂದಿ ಯುವಕರು ತೆರಳುತ್ತಿದ್ದು, ಈ ವೇಳೆ ಮೈಮರೆತು ಫೇಸ್ಬುಕ್ ಲೈವ್ ಮಾಡಿಕೊಂಡಿದ್ದರಿಂದ ಬೋಟ್ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಬೋಟ್ ಪಲ್ಟಿಯಾಗಿ ಮಂದಿ ಯುವಕರು ಕೂಡ ನೀರಿನಲ್ಲಿ ಬಿದ್ದಿದ್ದು, ಕೂಡಲೇ ಅವರನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಇಬ್ಬರು ಆಸ್ಪತ್ರೆ ತಲುಪುವ ವೇಳೆ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.