ಮುಂಬೈ, ಫೆ.22 (DaijiworldNews/MB) : ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ವಿರುದ್ದ ಶಿವಸೇನೆಯ ಯುವ ಘಟಕ 'ಯುವ ಸೇನೆ'ಯು ಮುಂಬೈನ ಬೀದಿಗಳಲ್ಲಿ ಹಾಗೂ ಪೆಟ್ರೋಲ್ ಬಂಕ್ಗಳಲ್ಲಿ ಬ್ಯಾನರ್ ಹಾಕಿ ಪ್ರತಿಭಟನೆ ನಡೆಸುತ್ತಿದೆ. ಈ ಬ್ಯಾನರ್ನಲ್ಲಿ, ''ಇದುವೇ ಅಚ್ಚೇ ದಿನ್?'' ಎಂದು ಹಿಂದಿಯಲ್ಲಿ ಹಾಕಲಾಗಿದ್ದು ಗ್ಯಾಸ್, ಪೆಟ್ರೋಲ್, ಡಿಸೇಲ್ಗಳ ಬೆಲೆ 2015ರಲ್ಲಿ ಎಷ್ಟಿತ್ತು, 2021ರಲ್ಲಿ ಎಷ್ಟಾಗಿದೆ ಎಂಬುದನ್ನು ಪಟ್ಟಿ ಮಾಡಲಾಗಿದೆ.
ತೈಲ ಬೆಲೆ ಏರಿಕೆ ವಿರುದ್ದ ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಯುವ ಸೇನೆಯು ಕೇಂದ್ರ ಸರ್ಕಾರದ ಕಾಲೆಳೆದಿದೆ.
ಕಳೆದ ಹಲವು ದಿನಗಳಿಂದ ತೈಲ ದರ ಏರಿಕೆಯಾಗುತ್ತಲೇ ಇದ್ದು ಕೆಲವು ನಗರಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 100 ಕ್ಕೆ ಏರಿದೆ. ಈ ತೈಲ ಬೆಲೆ ಏರಿಕೆಯ ಕಾರಣದಿಂದಾಗಿ ಉಳಿದ ಹಲವು ವಸ್ತು, ಸೇವೆಗಳ ಬೆಲೆಯೂ ಕೂಡಾ ಏರಿಕೆಯಾಗಿದೆ.