ಸೇಲಂ, ಫೆ.22 (DaijiworldNews/PY): "ಭಾರತ- ಚೀನಾ ನಡುವೆ ಒಂಭತ್ತನೇ ಸುತ್ತಿನ ಮಾತುಕತೆ ನಡೆದ ನಂತರ ಪೂರ್ವ ಲಡಾಕ್ನಲ್ಲಿ ಭಾರತ-ಚೀನಾ ಸೇನೆ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತೀಯ ಜನತಾ ಯುವ ಮೋರ್ಚಾ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, "ಒಂಭತ್ತನೇ ಸುತ್ತಿನ ಸೇನಾ ಹಾಗೂ ರಾಜತಾಂತ್ರಿ ಮಾತುಕತೆಯ ಬಳಿಕ ಸೇನೆ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಭಾರತೀಯ ಸೇನೆಯ ಶೌರ್ಯವನ್ನು ಕಾಂಗ್ರೆಸ್ ಅನುಮಾನಿಸುತ್ತಿದೆ. ಇದು ದೇಶದೇಶಕ್ಕೆ ಹಾಗೂ ಹುತಾತ್ಮರಾಗುತ್ತಿರುವ ಯೋಧರಿಗೆ ಮಾಡುತ್ತಿರುವ ಅನುಮಾನವಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ಪ್ರಧಾನಿ ಮೋದಿ ಸರ್ಕಾರವು ದೇಶದ ಏಕತೆ, ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌತ್ವದ ವಿಚಾರದ ಬಗ್ಗೆ ಎಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ, ಮಾಡುವುದು ಇಲ್ಲ" ಎಂದಿದ್ದಾರೆ.