ಕೋಲ್ಕತ್ತ, ಫೆ. 21 (DaijiworldNews/HR): ಟಿಎಂಸಿ ಮುಖಂಡ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿಯನ್ನು ಕಲ್ಲಿದ್ದಲು ಅಕ್ರಮ ಪ್ರಕರಣದಲ್ಲಿ ತನಿಖೆಗೆ ಸಹಕರಿಸುವಂತೆ ಗೆ ಸಿಬಿಐ ನೋಟಿಸ್ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕೋಲ್ಕತಾ ನಿವಾಸಕ್ಕೆ ನೋಟಿಸ್ ತಲುಪಿಸಿದ್ದು, ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜೀರಾ ಬ್ಯಾನರ್ಜಿಯನ್ನು ಸಿಬಿಐ ತಂಡ ಪ್ರಶ್ನಿಸುವ ಸಾಧ್ಯತೆ ಎಂದು ಹೇಳಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಶುಕ್ರವಾರ ಹೊಸ ಸುತ್ತಿನ ಶೋಧ ನಡೆಸಿದೆ ಎನ್ನಲಾಗಿದೆ.
2020 ನವೆಂಬರ್ನಲ್ಲಿ ಕಲ್ಲಿದ್ದಲು ದಂಧೆಯ ಕಿಂಗ್ಪಿನ್ ಮಾಂಜ್ಹಿ ಅಲಿಯಾಸ್ ಲಾಲಾ, ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್ನ ಜನರಲ್ ಮ್ಯಾನೇಜರ್ ಅಮಿತ್ ಕುಮಾರ್ ಧಾರ್ ಮತ್ತು ಜಾಯೇಶ್ ಚಂದ್ರ ರೈ ಜೊತೆಗೆ ಇಸಿಎಲ್ ಭದ್ರತಾ ಮುಖ್ಯಸ್ಥ ತನ್ಮಯ್ ದಾಸ್, ಏರಿಯಾ ಸೆಕ್ಯುರಿಟಿ ಇನ್ಸ್ಪೆಕ್ಟರ್, ಕುನುಸ್ತೋರಿಯಾ ಧನಂಜಯ್ ರೈ ಮತ್ತು ಎಸ್ಎಸ್ಐ ಮತ್ತು ಕಾಜೋರ್ ಪ್ರದೇಶದ ಭದ್ರತಾ ಉಸ್ತುವಾರಿ ದೇಬಾಶಿಶ್ ಮುಖರ್ಜಿ ಅವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು.