ಕೋಲ್ಕತ್ತ, ಫೆ. 21 (DaijiworldNews/HR): "ಕೋಲ್ಕತ್ತ ಮೆಟ್ರೊದ ಉತ್ತರ-ದಕ್ಷಿಣ ಮಾರ್ಗವನ್ನು ನೋಪರಾ-ದಕ್ಷಿಣೇಶ್ವರದವರೆಗೆ ವಿಸ್ತರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಅವನ್ನು ಸೋಮವಾರ ಉದ್ಘಾಟಿಸಲಿದ್ದಾರೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕೋಲ್ಕತ್ತ ಮೆಟ್ರೊ ವಕ್ತಾರೆ ಇಂದ್ರಾಣಿ ಬ್ಯಾನರ್ಜಿ , "ಹೂಗ್ಲಿ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ನೋಪರಾ-ದಕ್ಷಿಣೇಶ್ವರ ಮಾರ್ಗದ ಮೆಟ್ರೊಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ" ಎಂದರು.
ಇನ್ನು "ಸಾಮಾನ್ಯ ಪ್ರಯಾಣಿಕರಿಗೆ ಮಾತ್ರವಲ್ಲದೆ, ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾಧಿಗಳಿಗಾಗಿ ಮಾಲಿನ್ಯ ಮುಕ್ತ ಪ್ರಯಣವನ್ನು ಕಲ್ಪಿಸಿಕೊಡಲಾಗುತ್ತದೆ. ಈ ಮೆಟ್ರೋ ಸೇವೆಯಿಂದಾಗಿ ಕಾವಿ ಸುಭಾಷ್ ಸ್ಟೇಷನ್ನಿಂದ ದಕ್ಷಿಣೇಶ್ವರದ 31.3 ಕಿ.ಮೀ ದೂರವನ್ನು ಒಂದು ಗಂಟೆಯಲ್ಲಿ ಕ್ರಮಿಸಲು ಸಾಧ್ಯವಾಗಲಿದೆ" ಎಂದು ತಿಳಿಸಿದ್ದಾರೆ.