ಪುಣೆ, ಫೆ.21 (DaijiworldNews/MB) : ನಗರದಾದ್ಯಂತ ಮತ್ತೆ ಕೊರೊನಾ ಸೋಂಕು ಹರಡಲು ಆರಂಭವಾಗಿರುವ ಹಿನ್ನೆಲೆ ಪುಣೆಯಲ್ಲಿ ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ. ಹಾಗೆಯೇ ಫೆಬ್ರವರಿ 28 ರವರೆಗೆ ಶಾಲೆಗಳು ಮತ್ತು ಕಾಲೇಜುಗಳು ಸಹ ಮುಚ್ಚಲಿದೆ. ಅಗತ್ಯ ಸೇವೆ ಹೊರತುಪಡಿಸಿ ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ಪುಣೆಯಲ್ಲಿ ಕರ್ಫ್ಯೂ ಘೋಷಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪುಣೆ ವಿಭಾಗೀಯ ಆಯುಕ್ತರು, ''ಸೋಮವಾರ ಹೊಸ ಮಾರ್ಗಸೂಚಿ ಜಾರಿಗೆ ತರಲಾಗುವುದು'' ಎಂದು ಹೇಳಿದ್ದಾರೆ.
ಮುಂಬೈ ಮತ್ತು ಪುಣೆಯಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗಿದೆ. ಮಹಾರಾಷ್ಟ್ರದ ಹಲವೆಡೆ ದೈನಂದಿನ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಲೇ ಇದೆ. ವಲಸೆ ಹಾಗೂ ಕೊರೊನಾ ನಿಯಮದ ಉಲ್ಲಂಘನೆ ಕಾರಣದಿಂದ ನೀತಿ ನಿಯಮಗಳನ್ನು ಪಾಲಿಸದ ಕಾರಣ ಕೊರೊನಾ ಪ್ರಕರಣಗಳು ಭಾರೀ ಏರಿಕೆಯಾಗಿದೆ ಎಂದು ವರಿದಿಯಾಗಿದೆ.
ಇನ್ನು ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಕೇಂದ್ರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಅಧಿಕ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯಗಳಿಗೆ ಕೂಡಲೇ ಎಚ್ಚೆತ್ತುಕೊಳ್ಳುವಂತೆ ತಿಳಿಸಿದೆ.