ಬೆಂಗಳೂರು, ಫೆ.21 (DaijiworldNews/PY): "ಕಾಂಗ್ರೆಸ್ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಮರಳಿ ಆಹ್ವಾನ ನೀಡಲಾಗುವುದು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ರವಿವಾರ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಮಲಿಂಗಾರೆಡ್ಡಿ, ಧ್ರುವ ನಾರಾಯಣ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಮರಳಿ ಆಹ್ವಾನ ನೀಡಲಾಗುವುದು. ಯಾವುದೇ ರೀತಿಯಾದ ಷರತ್ತುಗಳಿಲ್ಲದೇ ಪಕ್ಷಕ್ಕೆ ಬಂದಲಲ್ಇ ಅವರನ್ನು ಸಂತೋಷದಿಂದ ಬರಮಾಡಿಕೊಳ್ಳಲಾಗುವುದು" ಎಂದರು.
"ಈ ವರ್ಷ ಕಾಂಗ್ರೆಸ್ ಪಾಲಿಗೆ ಹೋರಾಟ ಹಾಗೂ ಸಂಘರ್ಷದ ವರ್ಷವಾಗಿದೆ. ಕಾಂಗ್ರೆಸ್ ಕಚೇರಿ ಪಕ್ಷದ ದೇವಾಲಯವಿದ್ದಂತೆ. ಕಾಂಗ್ರೆಸ್ ಕಚೇರಿಯ ಒಳಗಡೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿಯೇ ಎಲ್ಲಾ ಸ್ಥಳೀಯ ನಾಯಕರು ಸಭೆ ಮಾಡಬೇಕು. ಸಭೆಗಳನ್ನು ನಾಯಕರ ಮನೆಯಲ್ಲಿ ಮಾಡಬಾರದು" ಎಂದು ಹೇಳಿದರು.
"ಡಿ.ಕೆ. ಶಿವಕುಮಾರ್ ಅವರು ಮುಂದಿನ ಸಿಎಂ ಎಂದು ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದರು. ನಾನು ಸಿಎಂ ಆಗುವುದು ಮುಖ್ಯವಲ್ಲ ಬದಲಾಗಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಮುಖ್ಯ" ಎಂದು ತಿಳಿಸಿದರು.