ಹುಬ್ಬಳ್ಳಿ, ಫೆ. 21 (DaijiworldNews/HR): "ಅಯ್ಯೋಧೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಕುರಿತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರು ನೀಡುತ್ತಿರುವ ಹೇಳಿಕೆಯ ಹಿಂದೆ ಚುನಾವಣೆಗೆ ಮತ ಕಸಿದುಕೊಳ್ಳುವ ಚಿಂತನೆ ಇದೆ. ಆದರೆ ಮುಸ್ಲಿಮರು ಇವರನ್ನು ನಂಬುವುದಿಲ್ಲ" ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಮ ಮಂದಿರಕ್ಕೆ ದೇಣಿಗೆ ಕೋಡುವುದಿಲ್ಲವಾದರೆ, ಬಾಯಿ ಮುಚ್ಚಿಕೊಂಡು ತೆಪ್ಪಗಿರಬೇಕು, ಅದು ಬಿಟ್ಟು ತಪ್ಪು ಸಂದೇಶದ ಹೇಳಿಕೆಗಳನ್ನು ನೀಡುವುದನ್ನು ಮೊದಲು ನಿಲ್ಲಿಸಬೇಕು" ಎಂದರು.
ಇನ್ನು "ಮಂದಿರಕ್ಕೆ ದೇಣಿಗೆ ಸಂಗ್ರಹಕ್ಕೆ ಟ್ರಸ್ಟ್ ರಚನೆಗೊಂಡಿದ್ದು, ಪಾರದರ್ಶಕತೆ ಕಾಪಾಡಲಾಗುತ್ತಿದೆ. ಸಿದ್ದರಾಮಯ್ಯ ಮಂದಿರ ಒಂದೇ ಅಲ್ಲ. ದಿಶಾ ರವಿ ಬಂಧನ ವಿಚಾರದಲ್ಲೂ ಅಗತ್ಯವಿಲ್ಲದ ಸುಳ್ಳು ಹೇಳಿಕೆ ನೀಡುವ ಮೂಲಕ ಖಲೀಸ್ತಾನದ ಬೆಂಬಲಿಸುವವರನ್ನು ಬೆಂಬಲಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.