ಜಮ್ಮು, ಫೆ.21 (DaijiworldNews/PY): "ಅಲ್-ಬದರ್ ಸಂಘಟನೆಯ ಕಾರ್ಯಕರ್ತರೋರ್ವನನ್ನು ಐಐಡಿ ಪತ್ತೆ ಪ್ರಕರಣದಡಿ ಬಂಧಿಸಲಾಗಿದೆ" ಎಂದು ರವಿವಾರ ಅಧಿಕಾರಿಯೋರ್ವರು ಹೇಳಿದರು.
ಸಾಂದರ್ಭಿಕ ಚಿತ್ರ
ಬಂಧಿತನನ್ನು ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಬಾತ್ಬಾಗ್-ಹನಿಪೊರ ಗ್ರಾಮದ ನಿವಾಸಿ ರಹ್ ಹುಸೈನ್ ಭಟ್ ಎಂದು ಗುರುತಿಸಲಾಗಿದ್ದು, ಈತ ಅಲ್-ಬದರ್ ಸಂಘಟನೆಯ ಕಾರ್ಯಕರ್ತ.
ಜಮ್ಮು ಬಸ್ ನಿಲ್ದಾಣದಲ್ಲಿ ಫೆ.13ರಂದು ನರ್ಸಿಂಗ್ ವಿದ್ಯಾರ್ಥಿಯ ಬಳಿ 7 ಕೆ.ಜಿಯ ಐಇಡಿ ಸಿಕ್ಕಿತ್ತು. 2019ರಲ್ಲಿ ಫೆ.14ರಂದು ಪುಲ್ವಾಮ ದಾಳಿಯ ಎರಡನೇ ವರ್ಷಾಚರಣೆ ವೇಳೆ ಶ್ರೀನಗರದಲ್ಲಿ ದಾಳಿ ನಡೆಸಲು ಸಂಚು ನಡೆಸಲಾಗಿತ್ತು.
"ಹುಸೈನ್ ಉಗ್ರ ಸಂಘಟನೆಗೆ ಅವಶ್ಯಕವಾದಂತ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ. ರಘುನಾಥ್ ಮಂದಿರ ಸೇರಿದಂತೆ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಲು ಈತನಿಗೆ ಸೂಚನೆ ನೀಡಲಾಗಿತ್ತು" ಎಂದು ಜಮ್ಮುವಿನ ಹಿರಿಯ ಅಧಿಕಾರಿ ಮುಖೇಶ್ ಸಿಂಗ್ ತಿಳಿಸಿದರು.
"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ" ಎಂದು ತಿಳಿಸಿದರು.