ಬೆಂಗಳೂರು, ಫೆ.21 (DaijiworldNews/PY): "ಅಗತ್ಯವಾದ ವಸ್ತುಗಳ ಮೇಲೆ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದ್ದು, ಇದರಿಂದ ಜನಸಾಮಾನ್ಯರು ತೊಂದರೆಗೊಳಗಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಗುರುತು ಸಿಗಬಾರದು ಎಂದು ಗಡ್ಡ ಬೆಳೆಸಿದ್ದಾರೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
ನಗರದಲ್ಲಿ ರವಿವಾರ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, "ಪ್ರಸ್ತುತ ಕೇಂದ್ರದಲ್ಲಿ ಅತಿ ಕೆಟ್ಟ ಸರ್ಕಾರ ಅಧಿಕಾರದಲ್ಲಿದೆ. ಸುಳ್ಳಿಗೆ ಪರ್ಯಾಯ ಪದವೇ ನರೇಂದ್ರ ಮೋದಿ. ಮೋದಿ ಮೋದಿ ಎಂದು ಕೂಗುತ್ತಾ ಅವರನ್ನು ಅಧಿಕಾರಕ್ಕೇರಿಸಿದ ಯುವಸಮೂಹಕ್ಕೆ ಮೋದಿ ಅನ್ಯಾಯವೆಸಗಿದ್ದಾರೆ. ಅವರ ಬಣ್ಣ ಬಯಲು ಮಾಡುವ ಕಾರ್ಯ ಕಾಂಗ್ರೆಸ್ನದ್ದು" ಎಂದು ಹೇಳಿದರು.
"ರಾಜ್ಯದಲ್ಲಿ ಅಸಮರ್ಥ, ಭ್ರಷ್ಟ ಸರ್ಕಾರ ಅಧಿಕಾರದಲ್ಲಿದೆ. ಏನು ಕೇಳಿದರೂ ಕೂಡಾ ದುಡ್ಡಿಲ್ಲ ಎಂದು ಹೇಳುತ್ತಾರೆ. ದುಡ್ಡಿಲ್ಲ ಎಂದ ಮೇಲೆ ಏಕೆ ಅಧಿಕಾರದಲ್ಲಿದ್ದೀರಿ?. ಕುರ್ಚಿಯಿಂದ ಇಳಿಯಿರಿ. ನಾವು ಯಾರಾದರೂ ಬಂದು ಕುಳಿತುಕೊಳ್ಳುತ್ತೇವೆ" ಎಂದರು.