ಜಮ್ಮು, ಫೆ.21 (DaijiworldNews/PY): "ಪಾಕಿಸ್ತಾನ ಸೇನೆಯು, ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯ ಬಳಿ ಇರುವ ಮುಂಚೂಣಿ ಠಾಣೆಗಳು ಹಾಗೂ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ" ಎಂದು ರವಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಶನಿವಾರ ರಾತ್ರಿ 10.25ಕ್ಕೆ ಹಿರಾನಗರ ಸೆಕ್ಟರ್ನ ಬೊಬಿಯಾ ಪ್ರದೇಶದಲ್ಲಿ ಪಾಕ್ ಸೇನೆಯು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಗೆ ಬಿಎಸ್ಎಫ್ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ" ಎಂದು ಹೇಳಿದ್ದಾರೆ.
"ರವಿವಾರ ಬೆಳಗ್ಗೆ 4.30ರವರೆಗೆ ಗುಂಡಿನ ಚಕಮಕಿ ನಡೆದಿದೆ. ದಾಳಿಯಲ್ಲಿ ಯಾವುದೇ ಪ್ರಾಣ ಹಾನಿ ಹಾಗೂ ಆಸ್ತಿ ಹಾನಿ ಸಂಭವಿಸಿಲ್ಲ" ಎಂದಿದ್ದಾರೆ.