ಬೆಂಗಳೂರು, ಫೆ.21 (DaijiworldNews/MB) : ಲಿಂಗಾಯತ ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದು, ''ಈ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಜೊತೆ ಮಾತನಾಡಿದ್ದೇನೆ. ಮಾತುಕತೆಗೆ ಸ್ವಾಮೀಜಿಗಳನ್ನು ಆಹ್ವಾನಿಸುತ್ತೇವೆ'' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
''ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗ ಸಭೆ ನಡೆಸಿ ಚರ್ಚಿಸಲಿದೆ. ಸಂವಿಧಾನದ ಪ್ರಕಾರವಾಗಿ ಆಯೋಗದ ಮುಖೇನ ಯಾವುದೇ ಮೀಸಲಾತಿ ವಿಚಾರದ ಶಿಫಾರಸು ಬರಬೇಕಾಗಿದೆ. ಆದರೆ ಈಗ ಪಂಚಮಸಾಲಿ ಸಮಾವೇಶ ನಡೆಯುತ್ತಿದೆ'' ಎಂದು ಹೇಳಿದರು.
''ಈಗಾಗಲೇ ಸ್ವಾಮೀಜಿ ಅವರೊಂದಿಗೆ ಮಾತುತಡೆ ನಡೆಸಲಾಗಿದ್ದು, ಸಂವಿಧಾನದ ನಿಯಮಗಳ ಬಗ್ಗೆ ಅವರಿಗೆ ಮನವರಿಕೆ ಮಾಡುತ್ತೇವೆ. ಮಾತುಕತೆಗಾಗಿ ಸ್ವಾಮೀಜಿ ಅವರನ್ನು ಆಹ್ವಾನಿಸುತ್ತೇವೆ. ಸಿಎಂ ಕೂಡಾ ಇದನ್ನೇ ಹೇಳಿದ್ದಾರೆ'' ಎಂದರು.