ನವದೆಹಲಿ, ಫೆ. 21 (DaijiworldNews/HR): "ಭಾರತೀಯ ಎಲ್ಲಾ ಭಾಷೆಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ಸಬಲೀಕರಣಗಳ ಬಗ್ಗೆ ಪ್ರಧಾನಿ ಮೋದಿ ಸರ್ಕಾರ ಬದ್ಧತೆಯನ್ನು ತೋರಿಸುತ್ತದೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ಅಂತಾರಾಷ್ಟ್ರೀಯ ಮಾತೃ ಭಾಷೆ ದಿನದ ಅಂಗವಾಗಿ ಅವರು ಟ್ವೀಟ್ ಮಾಡಿರುವ ಅವರು, "ಭಾವನೆಗಳನ್ನು ಹಂಚಿಕೊಳ್ಳಲು ಮಾತೃ ಭಾಷೆ ಉತ್ತಮ ಮಾಧ್ಯಮವಾಗಿದ್ದು, ಭಾರತೀಯ ಎಲ್ಲಾ ಭಾಷೆಗಳ ಅಭಿವೃದ್ಧಿ, ಸಂರಕ್ಷಣೆ ಹಾಗೂ ಸಬಲೀಕರಣದ ಬಗ್ಗೆ ಮೋದಿ ಸರ್ಕಾರದ ಬದ್ಧತೆಯನ್ನು ಹೊಂದಿದೆ ಎಂದು ನಮ್ಮ ನೂತನ ಶಿಕ್ಷಣ ನೀತಿಯು ಪ್ರತಿಬಿಂಬಿಸುತ್ತದೆ" ಎಂಎಂದರು.
ಇನ್ನು "ಮಕ್ಕಳಲ್ಲಿ ದೇಶದ ಸಂಸ್ಕೃತಿಯ ಅಡಿಪಾಯವನ್ನು ಬಲಪಡಿಸಲು ಮಾತೃಭಾಷೆಯ ಬಳಕೆಗಾಗಿ ಗರಿಷ್ಠ ಪ್ರಯತ್ನಗಳನ್ನು ಮಾಡಬೇಕು" ಎಂದು ಹೇಳಿದ್ದಾರೆ.