ನವದೆಹಲಿ, ಫೆ.21 (DaijiworldNews/PY): ಉಭಯ ದೇಶಗಳು ಪೂರ್ವ ಲಡಾಖ್ ಗಡಿಯಿಂದ ಸೇನೆಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವೆ ಸುದೀರ್ಘವಾಗಿ 16 ಗಂಟೆಗಳ ಕಾಲ ಮಾತುಕತೆ ನಡೆಯಿತು.
ಪ್ರಾತಿನಿಧಿಕ ಚಿತ್ರ
ಎಲ್ಎಸಿ ಬಳಿ, ಚೀನಾ ಭಾಗದಲ್ಲಿರುವ ಮಾಲ್ಡೊ ಗಡಿ ಠಾಣೆಯಲ್ಲಿ ಉಭಯ ದೇಶಗಳ ನಡುವೆ ಸೇನಾ ಕಮಾಂಡರ್ ಮಟ್ಟದ ಹತ್ತನೇ ಸುತ್ತಿನ ಮಾತುಕತೆ ನಡೆಯಿತು.
ಈ ಮಾತುಕತೆಯು ಫೆ.20ರ ಶನಿವಾರದಂದು ಬೆಳಗ್ಗೆ 10 ಗಂಟೆಗೆ ಆರಂಭಗೊಂಡಿದ್ದು, ರವಿವಾರ ನಸುಕಿನ ಜಾವ 2 ಗಂಟೆಗೆ ಮುಕ್ತಾಯಗೊಂಡಿದೆ.
ಮಾತುಕತೆಯಲ್ಲಿ ಡೆಪ್ಸಾಂಗ್ನಲ್ಲಿ ಹಾಗೂ ಹಾಟ್ ಸ್ಪ್ರಿಂಗ್ಸ್, ಗೋಗ್ರಾದಲ್ಲಿ ಸಂಘರ್ಷವನ್ನು ಶಮನಗೊಳಿಸುವ ವಿಚಾರದ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಮೂಲಗಳು ಹೇಳಿವೆ.